ಈ ಸಂಜೆ - ಒರಟ ಐ ಲವ್ ಯೂ ಖ್ಯಾತಿಯ ಶ್ರೀ ಬರೆದು ನಿರ್ದೇಶಿಸಿದ 2011 ರ ಕನ್ನಡ ಭಾಷೆಯ ಪ್ರಣಯ ಚಿತ್ರ . ಇದರಲ್ಲಿ ಹೊಸಬರಾದ ಆರ್ಯ ಮತ್ತು ಸಂಜನಾ ಕಾಣಿಸಿಕೊಂಡಿದ್ದಾರೆ. ಜೈ ಶಿವ ಸಂಗೀತ ಸಂಯೋಜಿಸಿದ್ದು, ಶಂಕರ್ ಅವರ ಛಾಯಾಗ್ರಹಣವಿದೆ. ಚಿತ್ರವು 28 ಜನವರಿ 2011 ರಂದು ವಿಮರ್ಶಕರಿಂದ ನಕಾರಾತ್ಮಕ ವಿಮರ್ಶೆಗಳಿಗೆ ಬಿಡುಗಡೆಯಾಯಿತು. == ಕಥಾವಸ್ತು == ಸಂಜನಾ ಈ ಸಂಜೆಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಅಲ್ಲಿ ಮೊದಲಾರ್ಧವು ಸ್ವಲ್ಪ ಗ್ರಾಮೀಣ ಹಿನ್ನೆಲೆಯನ್ನು ಹೊಂದಿದ್ದರೆ, ದ್ವಿತೀಯಾರ್ಧವು ನಗರ ಜೀವನವನ್ನು ಹಿನ್ನೆಲೆಯಾಗಿ ಹೊಂದಿದೆ. ನಟ ಸುದೀಪ್ ಅವರ ಸೋದರಳಿಯ ಆರ್ಯ ಅವರು ಪದಾರ್ಪಣೆ ಮಾಡಿದ್ದಾರೆ. == ಪಾತ್ರವರ್ಗ == ಆರ್ಯನಾಗಿ ಆರ್ಯ ಅನು ಪಾತ್ರದಲ್ಲಿ ಸಂಜನಾ ಬಲ್ಲಿಯಾಗಿ ಕಿಶೋರ್ ರಂಗಾಯಣ ರಘು ಸುಮಿತ್ರಾ ಸತ್ಯಜಿತ್ ಬ್ಯಾಂಕ್ ಜನಾರ್ದನ್ ನೀನಾಸಂ ಅಶ್ವಥ್ ಅಪೂರ್ವ == ಧ್ವನಿಮುದ್ರಿಕೆ == ಜೈ ಶಿವ, (ಜೆ. ಶಿವಕುಮಾರ್) ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. 16 ನೇ ವಯಸ್ಸಿನಲ್ಲಿ, ಸಂಗೀತ ಸಂಯೋಜಿಸಲು ಪ್ರಾರಂಭಿಸಿದ ಅವರ 21 ನೇ ವಯಸ್ಸಿನಲ್ಲಿ ಈ ಚಿತ್ರದ ಮೂಲಕ ತಮ್ಮ ಮೊದಲ ಬ್ರೆಕ್ ಅನ್ನು ಪಡೆದರು. ಚಿತ್ರವು ಏಳು ಹಾಡುಗಳನ್ನು ಒಳಗೊಂಡಿದ್ದು ಅವನ್ನು ಹೃದಯ ಶಿವ ಮತ್ತು ಹೇಮಂತ್ ದಾಸ್ ಬರೆದಿದ್ದಾರೆ. ಜನಪ್ರಿಯ ಗಾಯಕರಾದ ಹೇಮಂತ್, ರಾಜೇಶ್ ಕೃಷ್ಣನ್, ಟಿಪ್ಪು, ಉದಿತ್ ನಾರಾಯಣ್, ಅನುರಾಧ ಶ್ರೀರಾಮ್, ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ, ಶಂಕರ್ ಮಹದೇವನ್ ಮತ್ತು ಜೈ ಶಿವ ಹಾಡುಗಳನ್ನು ಹಾಡಿದರು. === ಹಾಡ್ಶುಗಳ ಪಟ್ಟಿ === == ಉಲ್ಲೇಖಗಳು == ಈ ಸಂಜೆ @ ಐ ಎಮ್ ಡಿ ಬಿ ಜೈ ಶಿವ ವೆಬ್‌ಸೈಟ್ ಈ ಸಂಜೆ ಹಾಡುಗಳು 2013-01-27 ವೇಬ್ಯಾಕ್ ಮೆಷಿನ್ ನಲ್ಲಿ. ಈ ಸಂಜೆ ವೆಬ್ ಈ ಸಂಜೆ ಸಂಗೀತ ವಿಮರ್ಶೆ 2014-08-12 ವೇಬ್ಯಾಕ್ ಮೆಷಿನ್ ನಲ್ಲಿ.